ನನ್ನ ಈ ಬರಹ ಈ ಬ್ಲಾಗ್ ಲೋಕಕ್ಕೆ ಅರ್ಪಣೆ,
ವಚನ ಸಂದೇಶ.....೧
ಬಸವಣ್ಣನವರವಚನ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ,ಇವನಮ್ಮವನೆಂದೆನಿಸಯ್ಯಾ .
ಕೂದಲಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ
ಸಂದೇಶ.
ಸಕಲ ಜೀವರಾಶಿಗಳ ಲೇಸನ್ನು,ಮನುಕುಲದ ಕಲ್ಯಾಣವನ್ನು ಬಯಸಿದ ಬಸವಣ್ಣನವರು ವಿಶ್ವ ಕುಟುಂಬಿಯಾಗಿದ್ದಾರೆ. ಈ ವಚನದಲ್ಲಿ ಅವರು ವಿಶ್ವಭಾವೈಕ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಈ ಪ್ರಪಂಚದ ಜನರೆಲ್ಲರೊ ನಮ್ಮವರೇ, ನಾವೆಲ್ಲಾ ಪ್ರೀತಿ ವಿಶ್ವಾಸದಿಂದ ಇರಬೇಕು.ದ್ವೇಷ ಇರಕೂಡದು. ಇದರಲ್ಲಿಯೇ ಮನುಕುಲದ ಏಳ್ಗೆ ಇದೆ.ಅಸ್ಪೃಶ್ಯತೆ,ಜಾತಿ,ಮತಭೇದವೆಣಿಸದೆ ಎಲ್ಲರನ್ನೂ ಬಂಧುಗಳೆಂದು ಅಪ್ಪಿಕೊಳ್ಳಿ ಎಂದು ಹೇಳಿದ್ದಾರೆ.
No comments:
Post a Comment