ಆಯ್ದಕ್ಕಿ ಲಕ್ಕಮ್ಮನ ವಚನ.
ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದದತ್ತ ಲಕ್ಷಿ ತಾನಾಗಿಪ್ಪಲು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯಲ್ಲನ್ನಕ್ಕ
ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಶರಣದಂಪತಿಗಳು. ಅವರಿಬ್ಬರ ವ್ಯಕ್ತಿತ್ಯ ಚೈತನ್ಯವನ್ನು ತುಂಬುವಂತಹದು. ಶರಣ ಮಾರಯ್ಯನವರು ಅನುಭವ ಮಂಟಪದಲ್ಲಿ ಮೈಮರೆತು ಕುಳಿತಾಗ ಅವಳು ಗಂಡನಿಗೆ ಕಾಯಕದ ಬಗ್ಗೆ ಎಚ್ಚರ ನೀಡುತ್ತಾಳೆ. ಆಗಿನ ಶರಣೆಯರು ಧೀರರಾಗಿದ್ದರು. ಗಂಡನನ್ನು ಎಚ್ಚರಿಸುವ ಮನೋಸ್ಥೈರ್ಯವನ್ನು ಹೊಂದಿದವರಾಗಿದ್ದರು.
ಸಂದೇಶ
ಕಾಯಕವನ್ನು ಅತ್ಯಂತ ಶೃದ್ಧೆಯಿಂದ, ನಿಷ್ಟೆಯಿಂದ, ಮನೋಶುದ್ದತೆಯಿಂದ ಮಾಡಬೇಕು. ಇಂದಿನ ಕಾಯಕ ಇಂದೇ ಮಾಡಬೇಕು. ತನು ಕರಗಿಸಿ, ಮನ ಬಳಲಿಸಿ ಕಾಯಕ ಮಾಡಬೇಕು.ಕಾಯಕ ಕೇವಲ ಜೀವನೋಪಾಯವಲ್ಲ. ಅದು ಪರಮಾತ್ಮನ ಪೂಜೆಯಾಗಬೇಕು.ಸತ್ಯಶುದ್ಧ ಕಾಯಕವಾಗಬೇಕು. ಅಂದಾಗ ಮಾತ್ರ ಅಂತರಂಗ, ಬಹಿರಂಗದಲ್ಲಿ ಸಂತೃಪ್ತ ಭಾವ ಬರುತ್ತದೆ. ಆಗ ಮಾತ್ರ ಲಕ್ಷ್ಮಿಯು ತಾನಾಗಿಯೇ ಒಲಿದು ಬರುತ್ತಾಳೆ ಎಂದು ಈ ವಚನದಲ್ಲಿ ಲಕ್ಕಮ್ಮ ಹೇಳಿರುತ್ತಾಳೆ.
No comments:
Post a Comment