ವಚನ ಸಂದೇಶ...
ಶರಣ ಚಂದಿಮರಸರ ವಚನ
"ನಾಯ ಕುನ್ನಿಯ ಕಚ್ಚಬೇಡ ಬೊಗಳಬೇಡವೆಂದೆಡೆ
ಮಾಣ್ಪುದೇಹಂದಿಯನಶುದ್ಧವ ಹೊರಳಬೇಡವೆಂದೆಡೆ ಮಾಣ್ಪುದೇ?
ನಯದಿಬುದ್ಧಿಗಲಿಸಿದದೆ ಮಾಣ್ಪುದೇ ತಮ್ಮ ಸಹಜವ?
ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ?
ಹೇಳಾ ಸಿಮ್ಮಲಿಗೆಯ ಚೆನ್ನರಾಮಾ"
ಸಂದೇಶ
ಶರಣ ಚಂದಿಮರಸರು ಈ ವಚನದಲ್ಲಿ ಅತೀ ಸರಳ ಹಾಗೂ ಆಡುನುಡಿಗಳಲ್ಲಿ, ಬುದ್ದಿ ಹೇಳಿದ ರೀತಿಯಲ್ಲಿಯೇ
ದುರ್ವ್ಯಸನಿಯನ್ನು ಕುಟಕಿದ್ದಾರೆ. ನಾಯಿ ಮತ್ತು ಹಂದಿಗಳು ಎಷ್ಟೇ ಬೋಧಿಸಿದರೂ ಕೂಡ ಹೇಗೆ ತಮ್ಮ ಸಹಜ ಗುಣಗಳನ್ನು
ಬಿಡುವದಿಲ್ಲವೋ ಹಾಗೆಯೇ ದುರ್ವ್ಯಸನಿಗಳು ಸದ್ಗುರುಗಳ ಬೋಧನೆಗೆ ತಮ್ಮ ದುರ್ನಡತೆಯನ್ನು ಬಿಡಲಾರರು ಎಂದು
ಹೇಳಿದ್ದಾರೆ.
No comments:
Post a Comment