Friday, June 28, 2013

ಶ್ರೀ ಸಿದ್ಧ ಲಿಂಗೇಶ್ವರರ ವಚನ

           ಶ್ರೀ ಸಿದ್ಧ ಲಿಂಗೇಶ್ವರರ ವಚನ

            ಪ್ರಾಣಲಿಂಗ ಪೂಜೆ

                      “ಲಿಂಗದಲ್ಲಿ ಪ್ರಾಣವ ನಿಲಿಸಿ, ಪ್ರಾಣದಲ್ಲಿ ಲಿಂಗವನಿರಿಸಿ
                     ನೆನವುತ್ತಿಪ್ಪ ಕಾರಣ, ಪ್ರಾಣಲಿಂಗವಾಯಿತ್ತು.

                       ಆ ಲಿಂಗ ಸರ್ವ ಕರಣಂಗಳ ವೇದಿಸಿ,

                       ಕರಣಂಗಳು ಲಿಂಗ ಕಿರಣಂಗಳಾದ ಕಾರಣ,

                       ಒಳಗೆ ಕರತಲಾಮಲಕದಂತೆ ಲಿಂಗ ನೆಲೆಗೊಂಡಿತ್ತಾಗಿ

                       ಹೊರೆದೆನೆಂದು ಅರಿಯನು

                       ನಿಜಗುರು ಸ್ವತಂತ್ರಸಿದ್ಧಲಿಂಗೆಶ್ವರಾ, ನೀವು ಪ್ರಾಣಲಿಂಗವಾಗಿ.”
        
ಸಂದೇಶ: 
ಈ ವಚನವು ಪ್ರಾಣಲಿಂಗಸ್ಥಲದಲ್ಲಿ ಬರುತ್ತದೆ. ಭಕ್ತನು ಈ ವಿಶ್ವವೆಲ್ಲಾ ಸೃಷ್ಟಿಕರ್ತನ ಪ್ರಸಾದವೇ  ಎಂಬ ನಿರ್ಲಿಪ್ತ ಸ್ಥಿತಿಯಲ್ಲಿರುತ್ತಾನೆ. ಅದನ್ನು ಅನುಭವಿಸಲು ಪ್ರಾಣಲಿಂಗ ಪೂಜೆ ಮಾಡುತ್ತಾನೆ. ಅಂದರೆ, ಹೊರಗೆ ಇಷ್ಟಲಿಂಗದ ಅನುಸಂಧಾನ ಮಾಡಿದಂತೆ ಅಂತರಾಳದಲ್ಲಿಯೂ ಕೂಡ ಪ್ರಾಣಲಿಂಗದ ಅನುಭವವನ್ನು ಹೊಂದುತ್ತಾನೆ. ಹೀಗೆ ಮಾಡಿ ಆ ಎರಡರ ಅಭೇದವನ್ನು ಅನುಸಂಧಾನ ಮಾಡಿದಾಗ ಅದೇ ಪ್ರಾಣಲಿಂಗ ಪೂಜೆಯಾಗುತ್ತದೆ.

1 comment:

  1. ನಿಜಗುರು ಸ್ವತಂತ್ರಸಿದ್ಧಲಿಂಗೆಶ್ವರಾ ಎನ್ನುವ ನಾಮಾಂಕಿತದಲ್ಲಿ ವಚನಗಳನ್ನು ಕೊಟ್ಟ ಶ್ರೀ ಸಿದ್ಧ ಲಿಂಗೇಶ್ವರನ್ನು ನಮಗೆ ಪರಿಚಯಿಸಿದ ನಿಮಗೆ ಶರಣು.

    ಒಳ ಹೊರಗುಗಳಲ್ಲೂ ಇಷ್ಟಲಿಂಗದ ಅನುಸಂಧಾನದ ಪ್ರಾಮುಖ್ಯತೆ ಸಾರುವ ವಚನವಿದು.

    http://badari-poems.blogspot.in/

    ReplyDelete